Category: State News

ಸಿಎಂ ಇಬ್ರಾಹಿಂನ ಉಗುರಿನ ಧೂಳನ್ನೂ ಬಿಜೆಪಿಗೆ ಸೇರಿಸುವುದಿಲ್ಲ

ಕೃಷ್ಣನ ರಣತಂತ್ರವೇ ಬಿಜೆಪಿ ರಣತಂತ್ರವಾಗಿದ್ದು, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ದಿಗ್ವಿಜಯ ಸಾಧನೆಗೆ ಕೃಷ್ಣ ಯಾವ ರೀತಿ ರಣತಂತ್ರ ಮಾಡಿದ್ದರೋ ಅದೇ ರೀತಿ ಯುದ್ಧಕ್ಕೆ ತಯಾರಾಗಿದ್ದೇವೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ. ಯಾದಗಿರಿಯಲ್ಲಿ ಮಾತನಾಡಿದ ಅವರು, ಸಿಎಂ ಇಬ್ರಾಹಿಂ ನ ಉಗುರಿನ ಧೂಳನ್ನು ಬಿಜೆಪಿಗೆ ಸೇರಿಸುವದಿಲ್ಲ. ಅವನೊಬ್ಬ ಸ್ವಾರ್ಥಿ, ಅಧಿಕಾರಕ್ಕಾಗಿ ರಾಜಕಾರಣದಲ್ಲಿದ್ದಾನೆ. ಇಬ್ರಾಹಿಂ ಮತ್ತು ಸಿದ್ದರಾಮಯ್ಯರದ್ದು ಒಂದೇ ಮುಖ. ಅಧಿಕಾವಿದ್ದರೆ ಮಾತ್ರ ಕಾಂಗ್ರೆಸ್ಸಿನಲ್ಲಿರುತ್ತಾರೆ ಇಲ್ಲಾ ಅಂದರೆ ಬೈದು ಹೊರಗೆ ಬರ್ತಾರೆ ಎಂದರು.