ನಿಮಗೆ ನಿಮಿರುವಿಕೆ ಸಮಸ್ಯೆ ಇದೆಯೇ?

ನಿಮಿರುವಿಕೆ ಸಮಸ್ಯೆಯು ಪುರುಷರನ್ನು ಹೆಚ್ಚಾಗಿ ಚಿಂತೆಮಾಡುವ ಸಮಸ್ಯೆಗಳಲ್ಲಿ ಮುಖ್ಯವಾದುದು. ಈ ಸಮಸ್ಯೆ ಇದ್ದರೆ ಅಂತಹವರ ಲೈಂಗಿಕ ಜೀವನವೇ ಅಸಂತೃಪ್ತಿಯಿಂದ ಕೂಡಿರುತ್ತದೆ. ಒಂದಷ್ಟು ಮನೆ ಮದ್ದು ಹಾಗೂ ಹಣ್ಣುಗಳನ್ನು ಸೇವನೆ ಮಾಡುವುದರಿಂದ ಸಮಸ್ಯೆಯನ್ನು ದೂರಮಾಡಬಹುದಾಗಿದೆ.
ಆರೋಗ್ಯಕ್ಕೆ ಉಪಯುಕ್ತವಾಗಿರುವ ಹಣ್ಣಾಗಿರುವ ದಾಳಿಂಬೆಯನ್ನು ಸೇವನೆ ಮಾಡಬೇಕು. ಪ್ರೋಟೀನ್, ಫೈಬರ್, ವಿಟಮಿನ್, ಪೊಟ್ಯಾಶಿಯಂ ದಾಳಿಂಬೆಯಲ್ಲಿ ಇವೆ. ದಾಳಿಂಬೆ ಹಣ್ಣು ಸೇವನೆಯ ಜೊತೆಗೆ ಪ್ರತಿದಿನ ದಾಳಿಂಬೆ ಹಣ್ಣಿನ ಒಂದು ಲೋಟ ರಸ ಕುಡಿಯುವುದರಿಂದ ಲೈಂಗಿಕ ಶಕ್ತಿ ವೃದ್ಧಿಯಾಗಬಲ್ಲದು.

ಸಿಎಂ ಇಬ್ರಾಹಿಂನ ಉಗುರಿನ ಧೂಳನ್ನೂ ಬಿಜೆಪಿಗೆ ಸೇರಿಸುವುದಿಲ್ಲ

ಕೃಷ್ಣನ ರಣತಂತ್ರವೇ ಬಿಜೆಪಿ ರಣತಂತ್ರವಾಗಿದ್ದು, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ದಿಗ್ವಿಜಯ ಸಾಧನೆಗೆ ಕೃಷ್ಣ ಯಾವ ರೀತಿ ರಣತಂತ್ರ ಮಾಡಿದ್ದರೋ ಅದೇ ರೀತಿ ಯುದ್ಧಕ್ಕೆ ತಯಾರಾಗಿದ್ದೇವೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಯಾದಗಿರಿಯಲ್ಲಿ ಮಾತನಾಡಿದ ಅವರು, ಸಿಎಂ ಇಬ್ರಾಹಿಂ ನ ಉಗುರಿನ ಧೂಳನ್ನು ಬಿಜೆಪಿಗೆ ಸೇರಿಸುವದಿಲ್ಲ. ಅವನೊಬ್ಬ ಸ್ವಾರ್ಥಿ, ಅಧಿಕಾರಕ್ಕಾಗಿ ರಾಜಕಾರಣದಲ್ಲಿದ್ದಾನೆ. ಇಬ್ರಾಹಿಂ ಮತ್ತು ಸಿದ್ದರಾಮಯ್ಯರದ್ದು ಒಂದೇ ಮುಖ. ಅಧಿಕಾವಿದ್ದರೆ ಮಾತ್ರ ಕಾಂಗ್ರೆಸ್ಸಿನಲ್ಲಿರುತ್ತಾರೆ ಇಲ್ಲಾ ಅಂದರೆ ಬೈದು ಹೊರಗೆ ಬರ್ತಾರೆ ಎಂದರು.

ವಿದೇಶದಲ್ಲಿದ್ದ ಗಂಡ, ಪ್ರಿಯಕರನ ಕೈಯಿಂದಲೇ ಕೊಲೆಯಾದ ಪ್ರಿಯತಮೆ

ಲಿವಿಂಗ್ ಟೂ ಗೆದರ್ ನಲ್ಲಿದ್ದ ಪ್ರೀಯತಮೆಯ ಕತ್ತು ಕೊಯ್ದು ಕೊಲೆ ಮಾಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಕಲಬುರಗಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಕಲಬುರಗಿ ನಗರದ ನೂರಾನಿ ಮೊಹಲ್ಲಾ ಬಡಾವಣೆಯಲ್ಲಿ ನಡೆದಿದ್ದ ಶಹನಾ ಬೇಗಂ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ವಸೀಂ ಅಕ್ರಂನನ್ನು ರೋಜಾ ಠಾಣೆ ಪೊಲೀಸರು ಬಂಧಿಸಿದ್ದಾರೆ. ಪ್ರಿಯತಮೆ ಶಹನಾಳು ಆರೋಪಿ ವಸೀಂ ಅಕ್ರಮ್ ಗೆ ಹಣ ಕೊಡದೆ ಇದ್ದಾಗ ಆಕೆಯನ್ನು ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದನು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಹೊಸ ದಾಖಲೆ ಸೃಷ್ಟಿಸಿದ ಪುನೀತ್ ರಾಜ್ ಕುಮಾರ್ ನಟನೆಯ ಜೇಮ್ಸ್ ಸಿನಿಮಾ

‘ಜೇಮ್ಸ್’ ಫಿಲ್ಮ್ ನಟ ಪುನೀತ್ ರಾಜ್ ಕುಮಾರ್ ಅವರ ನಟನೆಯ ಅಂತಿಮ ಸಿನಿಮಾ. ಬಹುನಿರೀಕ್ಷಿತ ‘ಜೇಮ್ಸ್’ ಚಿತ್ರ ಬಿಡುಗಡೆಯಾಗುತ್ತಿದ್ದು, ಅಭಿಮಾನಿಗಳು ಕಾತುರದಿಂದ ಎದುರು ನೋಡುತ್ತಿದ್ದಾರೆ. ಕನ್ನಡದ ಅಪ್ರತಿಮ ನಟರಾಗಿದ್ದ ಪುನೀತ್ ರ ಜೇಮ್ಸ್ ಸಿನಿಮಾ ರಾಜ್ಯದಲ್ಲಿ ಮಾತ್ರವಲ್ಲದೇ ದೇಶಾದ್ಯಂತ ನಾಲ್ಕು ಸಾವಿರ ಸಿನಿಮಾ ಥೇಟರ್ ಗಳಲ್ಲಿ ಪ್ರದರ್ಶನಗೊಳ್ಳುತ್ತಿರುವುದು ವಿಶೇಷ. ಮಾರ್ಚ್ 17 ರಂದು ಮೊದಲ ಶೋ ಪ್ರದರ್ಶನವಾಗಲಿದ್ದು, ಅಂದಿನ ಬೆಳಗಿನ 6 ಗಂಟೆಗೆ 200 ಶೋಗಳು ಜೆಮ್ಸ್ ಗಾಗಿ ಮೀಸಲಿಟ್ಟಿವೆಯಂತೆ.